ರೋಮನ್ ಕಥೋಲಿಕ ಮಹಾನಗರವಾದ ಬೆಂಗಳೂರು ನಗರದ ಮಹಾಧರ್ಮಪ್ರಾಂತವು (: ) ಭಾರತದೇಶದಲ್ಲಿನ ರೋಮನ್ ಕಥೋಲಿಕ ಚರ್ಚ್-ಗಳ ಧಾರ್ಮಿಕ ಪ್ರದೇಶ ಅಥವಾ ಧರ್ಮಪ್ರಾಂತ ೧೩ ಫೆಭ್ರುವರಿ ೧೯೪೦ರಂದು ಬೆಂಗಳೂರು ಧರ್ಮಪ್ರಾಂತ್ಯವಾಗಿ ಸ್ಥಾಪಿತಲ್ಪಟ್ಟಿತು. ಪೋಪ್ ಹನ್ನರಡನೆಯ ಪಿಯುಸ್ ಅವರ ಆದೇಶದ ಮೇರೆಗೆ ಈ ಪ್ರಾಂತ್ಯವನ್ನು ಬೆಳಗಾಂ, ಬಳ್ಳಾರಿ, ಗುಲ್ಬರ್ಗಾ, ಚಿಕ್ಕಮಗಳೂರು, ಕಾರವಾರ, ಮಂಗಳೂರು, ಉಡುಪಿ, ಮೈಸೂರು ಮತ್ತು ಶಿವಮೊಗ್ಗ ಧರ್ಮಪ್ರಾಂತ್ಯಗಳನ್ನು ಒಟ್ಟಿಗೆ ಸೇರಿಸಿ ಮತ್ತು ಒಬ್ಬ ಬಿಷಪ್ಅವರನ್ನು ಸಫ‍್ರಾಗನ್ ಮೇಲ್ವಿಚಾರಕರನ್ನಾಗಿ ನೇಮಿಸಿ ಬೆಂಗಳೂರು ಮಹಾಧರ್ಮಪ್ರಾಂತವಾಗಿ ಸೆಪ್ಟೆಂಬರ್ ೧೯, ೧೯೫೩ರಲ್ಲಿ ಇದನ್ನು ಭಡ್ತಿಗೊಳಿಸಿ ಉನ್ನತ ದರ್ಜೆಗೇರಿಸಲಾಯಿತು. ಈ ಮಹಾಧರ್ಮಪ್ರಾಂತ್ಯವು ಪ್ರಧಾನ ಅಥವಾ ತಾಯಿ ಚರ್ಚ್ ಆಗಿ ಸಂ.ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್; ಮತ್ತು ಸಂ.ಮರಿಯ ಬೆಸಿಲಿಕವನ್ನು ಹೊಂದಿರುತ್ತದೆ. ಪೋಪ್ ದ್ವಿತೀಯ ಜೋನ್ ಪೌಲ್ ಅವರಿಂದ ಜುಲೈ ೨೨,೨೦೦೪ರಲ್ಲಿ ಬರ್ನಾಡ್ ಬ್ಲೇಸಿಯಸ್ ಮೊರಾಸ್ ಅವರು ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡು ಪ್ರಸ್ತುತ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. == ಬೆಂಗಳೂರು ಮಹಾಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ ಬಿಷಪರುಗಳ ಪಟ್ಟಿ == ಮೌರಿಸ್-ಬರ್ನಾಡ್-ಬಿನಾಯಿಟ್-ಜೋಸೆಫ್ ದೆಸ್ಪರೇರ್ಚಸ್, ಎಮ್.ಇ.ಪಿ (೧೯೪೦–೧೯೪೨) ಥೋಮಸ್ ಪೊಟ್ಟಚಮುರಿ (೧೯೪೨–೧೯೬೮) ದುರೈಸಾಮಿ ಸೈಮನ್ ಲೂರ್ಡ್ ಸ್ವಾಮಿ (೧೯೬೮–೧೯೭೧) ಪಕ್ಕಿಯಮ್ ಆರೋಕ್ಯಸ್ವಾಮಿ (೧೯೭೧–೧೯೮೬) ಅಲ್ಫೋನ್ಸಸ್ ಮಥಾಯಸ್ (೧೯೮೬–೧೯೯೮) ಇಗ್ನೇಷಿಯಸ್ ಪೌಲ್ ಪಿಂಟೊ (೧೯೯೮–೨೦೦೪) ಬರ್ನಾಡ್ ಬ್ಲೇಸಿಯಸ್ ಮೊರಾಸ್ (೨೦೦೪–ಪ್ರಸ್ತುತ) == ಮುಂದೆ ನೋಡಿ == ಭಾರತದ ರೋಮನ್ ಕಥೋಲಿಕತೆ ಬಾಲಯೇಸು ಚರ್ಚ್, ಬೆಂಗಳೂರು == ಬಾಹ್ಯ ಕೊಂಡಿಗಳು == - . ಟೆಂಪ್ಲೇಟು:---